ಯಾರೂ ಹೆದರುವುದು ಬೇಡ ಹೀಗೆಂದು ಟಿವಿ ಆಂಕರ್ ಹಿಂದೆ ಗನ್ ಹಿಡಿದು ತಾಲಿಬಾನ್ ಹೊಗಳಲು ಒತ್ತಾಯಿಸಿದರು
ಯಾರೂ ಹೆದರುವುದು ಬೇಡ..: ಹೀಗೆಂದು ಟಿವಿ ಆಂಕರ್ ಹಿಂದೆ ಗನ್ ಹಿಡಿದು ತಾಲಿಬಾನ್ ಹೊಗಳಲು ಒತ್ತಾಯಿಸಿದರು…!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದೇ ಅಲ್ಲಿಂದ ಪರಾರಿಯಾಗಲು ಅನೇಕರು ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನಿಗಳು ಯಾರೂ ದೇಶಬಿಟ್ಟು ಹೋಗಬೇಡಿ. ಇಸ್ಲಾಮಿಕ್ ಆಡಳಿತಕ್ಕೆ ಹೆದರಬೇಡಿ, ನಅವು ಮೊದಲಿನ ತಾಲಿಬಾನಿಗಳಲ್ಲ ಎಂದು ಭರವಸೆ ನೀಡುತ್ತಿದ್ದಾರೆ. ಇಂಥ ಮಾಡಬಾರದ ಕೆಲಸವನ್ನೂ ಮಡುತಿದ್ದಾರೆ.
ಈಗ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೆ ನುಗ್ಗಿ, ಅಲ್ಲಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್ ಹಿಡಿದು ನಿಂತು ಹೆದರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ನಿರೂಪಕನ ಸುತ್ತ ಐದಾರು ಉಗ್ರರು ಗನ್ ಹಿಡಿದು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ‘ತಾಲಿಬಾನಿಗಳ ಆಡಳಿತಕ್ಕೆ ಹೆದರಬೇಡಿ.. ಇಸ್ಲಾಮಿಕ್ ಆಡಳಿತಕ್ಕೆ ಯಾರೂ ಭಯಪಡುವುದು ಬೇಡ ಎಂದು ನಿಮ್ಮ ಸುದ್ದಿ ವಾಹಿನಿ ಮೂಲಕ ಹೇಳು, ತಾಲಿಬಾನಿಗಳನ್ನು ಹೊಗಳು’ಎಂದು ನಿರೂಪಕನಿಗೆ ಗನ್ ತೋರಿಸಿ, ಬಲವಂತವಾಗಿ ಹೇಳಿಸಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರು ನಾವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವು ಮಾಧ್ಯಮಗಳು ತಾಲಿಬಾನಿಗಳ ಆಡಳಿತ ಶುರುವಾಗುತ್ತಿದ್ದಂತೆ ತಮ್ಮಲ್ಲಿರುವ ಮಹಿಳಾ ಉದ್ಯೋಗಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದ್ದಾರೆ. ಕೆಲವೇ ದಿನಗಳ ಹಿಂದೆ, ಕಾಬೂಲ್ನಲ್ಲಿ ವರದಿ ಮಾಡುತ್ತಿದ್ದ ಟೋಲೋ ನ್ಯೂಸ್ ವರದಿಗಾರ ಮತ್ತು ಕ್ಯಾಮರಾಮನ್ ಅವರಿಗೆ ಉಗ್ರರು ಥಳಿಸಿದ್ದರು. ಕಾಬೂಲ್ನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಪತ್ರಕರ್ತರ ಮನೆಗಳನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ. DW ಎಂಬ ನ್ಯೂಸ್ ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನೊಬ್ಬನನ್ನು ಹತ್ಯೆ ಮಾಡಿದ್ದಾರೆ.