ರಾಜ್ಯದಲ್ಲಿ 1 ಸಾವಿರ ಇ ಚಾರ್ಜಿಂಗ್ ಸ್ಟೇಷನ್‌ ಶೀಘ್ರ: ಸಚಿವ ಸುನೀಲ್‌

ರಾಜ್ಯದಲ್ಲಿ 1 ಸಾವಿರ ಇ ಚಾರ್ಜಿಂಗ್ ಸ್ಟೇಷನ್‌ ಶೀಘ್ರ: ಸಚಿವ ಸುನೀಲ್‌

ಮೈಸೂರು: ಎಲೆಕ್ಟ್ರಿಕ್ ವಾಹನಗಳ ಸವಾರರಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿಸೆಂಬರ್ ಒಳಗೆ 1 ಸಾವಿರ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುವುದು' ಎಂದು ಇಂಧನ ಸಚಿವ ಸುನೀಲ್‌ಕುಮಾರ್ ತಿಳಿಸಿದರು.

ಸೆಸ್ಕ್ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಕೇವಲ 2 ಚಾರ್ಜಿಂಗ್ ಸ್ಟೇಷನ್‌ಗಳಿವೆ. ಕನಿಷ್ಠ 100 ಸ್ಟೇಷನ್‌ಗಳನ್ನಾದರೂ ತೆರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

'ಸದ್ಯಕ್ಕೆ ವಿದ್ಯುತ್ ನಿಗಮಗಳ ಖಾಸಗೀಕರಣದ ಪ್ರಸ್ತಾವ ಇಲ್ಲ. ಕೇಂದ್ರ ಸರ್ಕಾರದ ವಿದ್ಯುತ್ ಸರಬರಾಜಿನ ಮಸೂದೆ ಕುರಿತು ಮಾಹಿತಿ ಇಲ್ಲ' ಎಂದರು.