ರಾಜ್ಯದಲ್ಲಿ ಪ್ರತಿ ಹೋಬಳಿಗೊಂದು `ವೃದ್ದಾಶ್ರಮ' ಸ್ಥಾಪನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು : ರಾಜ್ಯದ ಪ್ರತಿ ಹೋಬಳಿಗೊಂದು ವೃದ್ದಾಶ್ರಮ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನಾ ಕಾರಣಗಳಿಂದ ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ.
ರಾಜ್ಯದಲ್ಲಿ 2011 ರ ಜನಗಣತಿ ಪ್ರಕಾರ 57.91 ಲಕ್ಷ ಹಿರಿಯ ನಾಗರಿಕರು ಇದ್ದಾರೆ. ಇಂತಹ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಹೋಬಳಿಗೊಂದು ವೃದ್ಧಾಶ್ರಮ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.