40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ, ʻಲಾಟರಿʼಯಿಂದ 5 ಕೋಟಿ ರೂ. ಗೆದ್ದ ವೃದ್ಧ

ನವದೆಹಲಿ: 35 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಪಂಜಾಬ್‌ನ ದೇರಾಬಸ್ಸಿಯಲ್ಲಿ 88 ವರ್ಷದ ವ್ಯಕ್ತಿಯೊಬ್ಬರಿಗೆ ರಾತ್ರೋರಾತ್ರಿ ಅದೃಷ್ಟವೊಂದು ಖುಲಾಯಿಸಿದೆ.
ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಪ್ರಕಟಿಸಿತು.
ಮಹಂತ್ ದ್ವಾರಕಾ ದಾಸ್ ಅವರು 1947 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ಪಂಜಾಬ್‌ಗೆ ವಲಸೆ ಬಂದರು. ದಾಸ್ ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರು. ಯಾವಾಗಲೂ ಇಲ್ಲದ್ದು, ಇದ್ದಕ್ಕಿದ್ದಂತೆ ದಾಸ್ ಅದೃಷ್ಟ ಬದಲಾಗಿದ್ದು, ಲಾಟರಿಯಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ʻನಾನು ಸಂತೋಷವಾಗಿದ್ದೇನೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ಗೆದ್ದ ಮೊತ್ತವನ್ನು ನನ್ನ ಇಬ್ಬರು ಪುತ್ರರಿಗೆ ಮತ್ತು ನನ್ನ ಡೇರಾಗೆ ವಿತರಿಸುತ್ತೇನೆʼ ಎಂದು ಮಹಂತ್ ದ್ವಾರಕಾ ದಾಸ್ ಹೇಳಿದ್ದಾರೆ.
ಜಿರಾಕ್‌ಪುರದಲ್ಲಿ ಲಾಟರಿ ವ್ಯವಹಾರ ನಡೆಸುತ್ತಿರುವ ಲೋಕೇಶ್, ದ್ವಾರಕಾ ದಾಸ್ ಅವರು ತೆರಿಗೆ ಕಡಿತದ ನಂತರ ಸುಮಾರು 3.5 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.