ರಾಮದೇವ್‌ ದೇಶದ ಜನರ ಕ್ಷಮೆಯಾಚಿಸಬೇಕು: ಮಹಿಳಾ ಆಯೋಗದ ಅಧ್ಯಕ್ಷೆ

ರಾಮದೇವ್‌ ದೇಶದ ಜನರ ಕ್ಷಮೆಯಾಚಿಸಬೇಕು: ಮಹಿಳಾ ಆಯೋಗದ ಅಧ್ಯಕ್ಷೆ

ನವದೆಹಲಿ: 'ಮಹಿಳೆಯರು ಸೀರೆ ಉಟ್ಟರೆ ಸುಂದರ, ಬಟ್ಟೆಯನ್ನೇ ಧರಿಸದಿದ್ದರೂ ಅಂದವಾಗಿ ಕಾಣಿಸುತ್ತಾರೆ' ಎಂಬ ಯೋಗ ಗುರು ಬಾಬಾ ರಾಮದೇವ್‌ ಅವರ ಹೇಳಿಕೆಗೆ ನವದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಕಿಡಿಕಾರಿದ್ದಾರೆ. ರಾಮದೇವ್‌ ಅವರು ಆಡಿದ ಮಾತಿನ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೇಳಿಕೆಯ ವಿಡಿಯೊ ಹಂಚಿಕೊಂಡಿರುವ ಸ್ವಾತಿ ಮಾಲಿವಾಲ್‌, 'ಮಹಿಳೆಯರ ಬಗ್ಗೆ ಹಗುರ ಹೇಳಿಕೆ ನೀಡಿರುವ ರಾಮದೇವ್‌ ಕೂಡಲೇ ದೇಶದ ಜನತೆಯ ಕ್ಷಮೆ ಕೇಳಬೇಕು' ಎಂದು ಟ್ವೀಟ್‌ ಮಾಡಿದ್ದಾರೆ.