ಬಂದ್ ಗೆ ಬೆಂಬಲ ನೀಡುವಂತೆ ಆಟೋ ಚಾಲಕನಿಗೆ ಕೈ ಮುಗಿದ ರೈತ.
ರೈತ ಸಂಘಟನೆಗಳು ಇಂದು ಭಾರತ ಬಂದ್ ಗೆ ಕರೆ ನೀಡಿರುವ ಬೆನ್ನಲ್ಲೇ ಭಾರತ ಬಂದ್ ಗೆ ಬೆಂಬಲ ನೀಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ರೈತರು ಆಟೋ ಚಾಲಕನ ಕಾಲಿಗೆ ಬಿದ್ದು ಬಂದ್ ಗೆ ಬೆಂಬಲ ನೀಡಿ ಎಂದು ಕೇಳಿಕೊಂಡ್ರು.ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಘಟನೆ ನಡೆದಿದ್ದು, ಆಟೋ ಚಾಲಕನಿಗೆ ಬೆಂಬಲ ನೀಡುವಂತೆ ದುಂಬಾಲು ಹಾಕಿದ ರೈತ ಸಂಘಟನೆಗಳು. ನಾವು ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ, ದಯಮಾಡಿ ನಮಗೆ ಸಪೋರ್ಟ್ ನೀಡಿ ಎಂದು ರೈತನು ಆಟೋ ಚಾಲಕನಿಗೆ ಮನವಿ ಮಾಡಿಕೊಂಡ್ರು. ಅಲ್ಲದೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರೈತ ಸಂಘಟನೆಗಳು ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದ್ರು.