ನೋಡನೋಡುತ್ತಿದ್ದಂತೇ ರೈಲು ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಲೋಕೋ ಇನ್ಸ್‌ಪೆಕ್ಟರ್

ಮುಂಬೈ: ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದನ್ನೇ ಕಾಯುತ್ತಿದ್ದ ಲೋಕೋ ಇನ್ಸ್‌ಪೆಕ್ಟರೊಬ್ಬರು, ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಮೃತನನ್ನು 57 ವರ್ಷದ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ ರಾಕೇಶ್ ಕುಮಾರ್ ಗೌಡ ಎಂದು ಗುರುತಿಸಲಾಗಿದೆ.
ಜನವರಿ 26 ರಂದು ನಡೆದ ಈ ಘಟನೆ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ರೈಲು ಬರುತ್ತಿದ್ದನ್ನೇ ಕಾಯುತ್ತಿದ್ದ ಅಧಿಕಾರಿ ರೈಲು ಸಮೀಪಿಸುತ್ತಿದ್ದಂತೇ, ಅದರ ಮುಂದೆ ಜಿಗಿದು ಹಳಿ ಮೇಲೆ ಮಲಗಿದ್ದಾರೆ. ಕೆಲವೇ ಕ್ಷಣದಲ್ಲಿ ರೈಲು ಅಧಿಕಾರಿಯ ಮೇಲೆ ಹರಿದಿದೆ.ಮೃತ ರಾಕೇಶ್ ಕುಮಾರ್ ಗೌಡ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರಾಕೇಶ್ ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.