ಈ ದಿನಕ್ಕಾಗಿ ಸುದೀರ್ಘ ಕಾಲ ಕಾಯುತ್ತಿದ್ದೆ : ಸೋನಿಯಾ ಗಾಂಧಿ

ಈ ದಿನಕ್ಕಾಗಿ ಸುದೀರ್ಘ ಕಾಲ ಕಾಯುತ್ತಿದ್ದೆ : ಸೋನಿಯಾ ಗಾಂಧಿ

ವದೆಹಲಿ,ಅ.17- ಈ ದಿನಕ್ಕಾಗಿ ಸುದೀರ್ಘ ಕಾಲ ಕಾಯುತ್ತಿದ್ದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ದೇಶಾದ್ಯಂತ ನಡೆಯುತ್ತಿರುವ ಚುನಾವಣೆಯಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ ಚಲಾವಣೆ ಮಾಡಿದ್ದಾರೆ.

ಸೋನಿಯಾ ಗಾಂಧಿ ಅವರು ತಮ್ಮ ಪುತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಜೊತೆ ಪಕ್ಷದ ಕಚೇರಿಗೆ ಆಗಮಿಸಿ ಮತ ಚಲಾಸಿದರು. ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಈ ದಿನಕ್ಕಾಗಿ ನಾನು ಸುದೀರ್ಘ ಸಮಯ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿಂದು ಮನಮೋಹನ್ ಸಿಂಗ್ ಮತದಾನ ಮಾಡಿದರು. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಪ್ರಥಮವಾಗಿ ಮತ ಚಲಾವಣೆ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್, ಅಂಬಿಕಾ ಸೋನಿ, ಅಜಯ್ ಮೊಕೇನ್, ವಿವೇಕ್ ಸಂತ ಸೇರಿದಂತೆ ಅನೇಕರು ಮತದಾನ ಚಲಾಯಿಸಿದ್ದಾರೆ. ಸಂಜೆ 4 ಗಂಟೆವರೆಗೂ ಚುನಾವಣೆ ನಡೆಯಲಿದೆ.