ಇಂದಿನಿಂದ ಹಿರಿಯ ಪ್ರಾಥಮಿಕ ಶಾಲೆಗಳು ಆರಂಭ | Chikkaballapur | School |

ಕಳೆದ ಒಂದುವರೆ ವರ್ಷದ ಬಳಿಕ ರಾಜ್ಯ ಸರ್ಕಾರ 6,7,8 ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸಿದ್ದು ಶಾಲಾ ಸಿಬ್ಬಂದಿ ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ, ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಶಾಲೆಯಲ್ಲಿ ಎಸ್ಡಿಎಂಸಿ ಸಮಿತಿಯೇ ಮುಂದೆ ನಿಂತು ಇಂದಿನಿಂದ ಶಾಲೆಗೆ ಬರುತ್ತಿರುವ ಮಕ್ಕಳಿಗೆ ಗುಲಾಬಿ ಜತೆಗೆ ಜಾಮಿಟ್ರಿ ಸಲಕರಣೆಗಳನ್ನು ನೀಡಿ ಬರಮಾಡಿಕೊಂಡಿದೆ. ಇದೆ ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ ಡಿಡಿಪಿಐ ಜಯರಾಮರೆಡ್ಡಿ ಪ್ರತಿಕ್ರಿಯೆ ನೀಡಿ, ನಮ್ಮ ನಿರೀಕ್ಷೆಗೂ ಮೀರಿ ಮಕ್ಕಳ ಹಾಜರಾತಿ ಬಂದಿದೆ ಎಲ್ಲ ಮಕ್ಕಳು ಖುಷಿಯಾಗಿ ಶಾಲೆ ಕಡೆ ಮುಖಮಾಡಿದ್ದಾರೆ. ಮನೆಗಳಲ್ಲಿ ಕೊಂಚ ಮಟ್ಟಿಗೆ ಅಭ್ಯಾಸ ಮಾಡಿದ ಕಾರಣ ಕೊಂಚಮಟ್ಟಿಗೆ ಸಹಾಯವಾಗಿದೆ ಎಂದು ಹೇಳಿದರು. ಶಾಲಾ ವಿದ್ಯಾರ್ಥಿನಿ ಅನುಷ್ಕ ಮಾತನಾಡಿ, ಮನೆಯಲ್ಲೆ ಇದ್ದು ಬೇಜಾರಾಗಿತ್ತು ಆನ್ ಪಾಠ ಬೋರಾಗಿತ್ತು ಶಾಲೆ ಪ್ರಾರಂಭವಾಗಿರುವುದಕ್ಕೆ ಖುಷಿಯಾಗಿದೆ ಎಂದರು.