ಕೆಳಗಡೆ ಮನೆ ಹೆಂಡ್ತಿ, ಮೇಲೆಗಡೆ ಮನೆ ಪತಿ ಕಾಣುತ್ತಿಲ್ಲವೆಂದು ಪ್ರತ್ಯೇಕ ದೂರು ದಾಖಲು

ಕೆಳಗಡೆ ಮನೆ ಹೆಂಡ್ತಿ, ಮೇಲೆಗಡೆ ಮನೆ ಪತಿ ಕಾಣುತ್ತಿಲ್ಲವೆಂದು ಪ್ರತ್ಯೇಕ ದೂರು ದಾಖಲು

ಬೆಂಗಳೂರು:ನಗರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ನನ್ನ ಹೆಂಡತಿ ಕಾಣುತ್ತಿಲ್ಲವೆಂದು ಗಂಡ, ಇನ್ನೊಂದು ಕಡೆ ನನ್ನ ಪತಿ ಕಾಣುತ್ತಿಲ್ಲವೆಂದು ಪತ್ನಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ‌ ದೂರು ನೀಡಿದ್ದಾರೆ.

ನಗರದ ಮಾರುತಿ ನಗರನ ಕಟ್ಟಡವೊಂದರಲ್ಲಿ ಎರಡು ಕುಟುಂಬ ವಾಸವಿದ್ದರು. ನವೀದ್ ಮತ್ತು ಝೀನತ್ ದಂಪತಿ ಕೆಳ ಮಹಡಿಯಲ್ಲಿ ವಾಸವಾಗಿದ್ದರು. ಇವರಿಬ್ಬರು 12 ವರ್ಷದ ಹಿಂದೆ ವಿವಾಹವಾಗಿದ್ದರು. ಮುಬಾರಕ್ ಮತ್ತು ಶಾಜಿಯಾ ದಂಪತಿ ಎರಡನೇ ಮಹಡಿಯಲ್ಲಿ ವಾಸವಾಗಿದ್ದರು. 8 ವರ್ಷದ ಹಿಂದೆ ವಿವಾಹವಾಗಿದ್ದರು. ಇದೀಗ ಅವರಿಬ್ಬರ ನಡುವೆ ಅಕ್ರಮ ಸಂಬಂಧವಿರುವುದು ಆರೋಪಿಸಲಾಗಿದೆ.ಮುಬಾರಕ್ ಪತ್ನಿ ಶಾಜಿಯಾ, ಝೀನತ್ ​​ಪತಿ ನವೀದ್ ಜೊತೆ​ ಸಂಬಂಧ ಹೊಂದಿದ್ದಾರೆಂದು ಆರೋಪವಿದೆ. ಈ ಹಿನ್ನೆಲೆ ಡಿಸೆಂಬರ್ 9 ,2022 ರಂದು ಶಾಜಿಯಾ ಮತ್ತು ನವೀದ್ ಇಬ್ಬರು ಮನೆಯಿಂದ ಹೊರಹೋದವರು ವಾಪಸ್ ಬರಲೇ ಇಲ್ಲ, ಪರಾರಿಯಾಗಿದ್ದಾರೆ ಆರೋಪ ಕೇಳಿಬಂದಿದ್ದು, ಇಬ್ಬರು ಒಟ್ಟಿಗೆ ಹೋಗಿದ್ದಾರೆಂದು ಝೀನತ್ ಮತ್ತು ಮುಬಾರಕ್ ಆರೋಪಿಸುತ್ತಿದ್ದಾರೆ.