ಚಿತ್ರದುರ್ಗದಲ್ಲಿ 32 ವರ್ಷಗಳ ನಂತರ ಗ್ರಾಮ ದೇವತೆಯ ಜಾತ್ರೆ: ಊರಿಗೆ ಬರುವ ಜನರಿಗೆ ಈ ರೂಲ್ಸ್ ಪಾಲನೆ ಕಡ್ಡಾಯ
ಚಿತ್ರದುರ್ಗ: ಸಾಮಾನ್ಯವಾಗಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಒಳಗೆ ಹೋಗುವಾಗ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ವಿಭಿನ್ನವಾಗಿ ಜಾತ್ರೆಯಲ್ಲಿ ಆಚರಣೆ ಮಾಡಲಾಗುತ್ತಿದೆ.
ಯಾಕಂದರೆ ಈ ಊರಿಗೆ ಬರುವ ಜನರು ಚಪ್ಪಲ್ಲಿ ಬಿಟ್ಟು ಎಂಟ್ರಿಕೊಡಬೇಕಿದೆ. ಹಾಗಾದ್ರೆ ಅದು ಯಾಕೆ? ಯಾವ ಊರು ಹೇಳ್ತಿವಿ ಇಲ್ಲಿದೆ ಮಾಹಿತಿ
ಹೌದು ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ನಂತರ ಗ್ರಾಮ ದೇವತೆಯ ಜಾತ್ರೆ ನಡೆಯುತ್ತಿದೆ.ಇದೀಗ ಇಡೀ ಜನರು ಹಬ್ಬದ ಸಂಭ್ರದಲ್ಲಿದ್ದಾರೆ. ಹೀಗಾಗಿ ಈ ಊರಿಗೆ ಬರುವ ಜನರು ಚಪ್ಪಲಿಯನ್ನು ಬಿಟ್ಟು ಬರಬೇಕು ಎಂಬ ಆರಚಣೆ ನಡೆಯುತ್ತಿದೆ.
ಗ್ರಾಮದ ದುರ್ಗಾಂಬಾ, ಮಾರಿಕಾಂಬಾ ಹಾಗೂ ಬಸಾಯ ಪಟ್ಟಣಂ ದೇವಿಯರ ಉತ್ಸವವನ್ನ ಗ್ರಾಮಸ್ಥರು ಆಚರಣೆ ಮಾಡುತ್ತಿದ್ದಾರೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ವಿಶೇಷ ಪೂಜಾ ಆಚರಣೆ ನಡೆದಿದೆ.