ಕಾರ್ತಿಕ ದೀಪೋತ್ಸವ |Dharwad|
ಧಾರವಾಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಶ್ರೀ ವಿರಾಂಜನೇಯ ಸ್ವಾಮಿಯ ಕಾರ್ತಿಕ ದೀಪೋತ್ಸವವನ್ನ ಶ್ರೀ ಷ.ಬ್ರ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಪಂಚಗೃಹ ಹಿರೇಮಠ, ಅಮ್ಮಿನಭಾವಿ, ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಮೂರು ಸಾವಿರ ಮಠ ಉಪ್ಪಿನಬೇಟಗೆರಿ, ಪ.ಪೂ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮಿಗಳು, ನಯಾನಗರ, ಶ್ರೀ ಬಸಯ್ಯ ಚ. ಹಿರೇಮಠ ಸ್ವಾಮಿಗಳು ಶ್ರೀ ರುದ್ರಸ್ವಾಮಿ ಮಠ ತಿಮ್ಮಾಪೂರು ಇವರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮರೇವಾಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನೀಲವ್ವ ವಗ್ಗರ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷರಾದ ಶ್ರೀ ಬಸವರಾಜ ಹೊಸುರು, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರಿ ಡಾ. ಎಸ್ ಆರ್ ರಾಮನಗೌಡ್ರ ಹಾಗೂ ಸಮಸ್ತ ತಿಮ್ಮಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು