ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ ಘನವೆತ್ತ ರಾಜ್ಯಪಾಲರು.

ಧಾರವಾಡ : ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ 72ನೇ ಘಟಿಕೋತ್ಸವವನ್ನು ಘನವೆತ್ತ ರಾಜ್ಯಪಾಲರಾದ ತಾವರಚಂದ ಗೆಹಲೋಟ್ ವಿದ್ಯುಕ್ತವಾಗಿ ಚಾಲನೆ ನೀಡಿದರು.
2022 ನೇ ಸಾಲಿನಲ್ಲಿ ಕ. ವಿ. ವಿ. ಯಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಗಳಿಗೆ ರಾಜ್ಯಪಾಲರು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ, ಪ್ರೊಫೆಸರ್ ಶ್ರೀನಿವಾಸ ಸೈದಾಪುರ ಹಾಗೂ ಮನೋಜ್ ಗೋರಕೆಲಾ ಅವರುಗಳಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ನವದೆಹಲಿಯ ಅಂತರಾಷ್ಟ್ರೀಯ ಜೆನೆಟಿಕ್ ಇಂಜಿನಿಯರಿಂಗ್ ನಿರ್ದೇಶಕ ಡಾ ದಿನಕರ ಸಾಲುಂಕೆ
ಕರ್ನಾಟಕ ವಿವಿ ಕುಲಪತಿ ಕೆ. ಬಿ. ಗುಡಸಿ ಹಾಗೂ ಕುಲಸಚಿವ ಯಶಪಾಲ ಕ್ಷೀರಸಾಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
9 ಲೈವ್ ನ್ಯೂಸ್ ಧಾರವಾಡ