ಹಚ್ಚಿದ ಗಿಡಗಳನ್ನೇ ಕಿತ್ತೊಗೆದರು ಸಿಎಂ ಬರಿವಿಕೆಗಾಗಿ

ಹೆಚ್ಚೆಚ್ಚು ಸಸಿಗಳನ್ನು ನೆಡಿ, ಪರಿಸರ ಸಂರಕ್ಷಣೆಗೆ ಕೈಜೋಡಿಸಿ ಅಂತಾ ಸರ್ಕಾರವೇ ಬಾಯಿ ಬಡಿದುಕೊಳ್ಳುತ್ತದೆ. ಆದರೆ, ಇದೀಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವೊಂದಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ನೂರಾರು ಗಿಡಗಳನ್ನು ಕಿತ್ತೊಗೆದಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗಳ ಜನ್ಮದಿನದ ಕಾರ್ಯಕ್ರಮವನ್ನು ಮನಗುಂಡಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ......