ಮಹಿಳೆಯ ಜೀವ ತೆಗೆದ 40 ರೂಪಾಯಿ

ಮಹಿಳೆಯ ಜೀವ ತೆಗೆದ 40 ರೂಪಾಯಿ

ಬಾಗಲಕೋಟೆ: ನನ್ನ 40 ರೂ. ತೆಗೆದುಕೊಂಡಿದ್ದೀಯಾ ಎಂದು ಅತ್ತೆ-ಸೊಸೆ ನಡುವೆ ಜಗಳ ನಡೆದು, ಸೊಸೆ ಮೃತಪಟ್ಟ ಘಟನೆ ಬೀಳಗಿ ತಾ|ನ ನಕ್ಕರಗುಂದಿ ಗ್ರಾಮದಲ್ಲಿ ನಡೆದಿದೆ. ಸೊಸೆ ರಂಗವ್ವ ಗುಳ್ಳಣ್ಣವರ ರಂಗವ್ವ & ಅತ್ತೆ ಭೀಮವ್ವ ಗುಣ್ಣಣ್ಣವರ ಜಗಳದಿಂದ ಕೋಪಗೊಂಡ ಮಗ ಮಳಿಯಪ್ಪ ಜಗಳ ಬಿಡಿಸುವ ವೇಳೆ ಪತ್ನಿಯ ಕಪಾಳಕ್ಕೆ ಹೊಡೆದಿದ್ದಾನೆ. ಒಂದೇ ಹೊಡೆತಕ್ಕೆ ರಂಗವ್ವ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾಳೆ. ಘಟನೆ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.