ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ 14m
ಬೆಳಗಾವಿ: ಸತತ ಮೂರನೇ ಬಾರಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಇಂದು ಆಯ್ಕೆಯಾದರು. ಈ ಹಿನ್ನಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ಸಲ್ಲಿಸಿದರು.
ಸಭಾಪತಿಯಾಗಿ ಇಂದು ಅವಿರೋಧವಾಗಿ ಮತ್ತೆ ಮೂರನೇ ಬಾರಿಗೆ ಬಸವರಾಜ ಹೊರಟ್ಟಿಯವರು ಆಯ್ಕೆಯಾದರು
ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ್ದೀರಿ. ಲಾ ವಿವಿ ಹುಬ್ಬಳ್ಳಿ ಗೆ ಬಂದಿದ್ರೆ ಅದು ನಿಮ್ಮಿಂದ. ಆ ಭಾಗದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಿದ್ದೀರಿ. ಪಕ್ಷವನ್ನು ಮೀರಿ, ನಿಮ್ಮ ನಿಲುವಿನಿಂದ ಜನರಿಗೆ ನ್ಯಾಯ ಕೊಡಿಸಿದ್ದೀರಿ. ದಾಖಲೆ ಮುರಿಯಲು ಇನ್ನೂ ಐವತ್ತು ವರ್ಷ ಬೇಕೇನೋ ಗೊತ್ತಿಲ್ಲ ಎಂದು ಹೇಳಿದರು.