ನಾಳೆಯಿಂದ ಮಂಡ್ಯದಲ್ಲಿ ಅದ್ದೂರಿ 'ಪುನೀತೋತ್ಸವʼ ಪ್ರಾರಂಭ

ನಾಳೆಯಿಂದ ಮಂಡ್ಯದಲ್ಲಿ ಅದ್ದೂರಿ 'ಪುನೀತೋತ್ಸವʼ ಪ್ರಾರಂಭ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಸ್ಮರಣೆಯ ನಿಮಿತ್ತ ನಾಳೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ʼಪುನೀತೋತ್ಸವʼ ಜರುಗಲಿದೆ. ನಾಳೆ ಪ್ರಾರಂಭವಾಗುವ ಪುನೀತೋತ್ಸವ ನ.27ರ ವರೆಗೆ ಅದ್ದೂರಿಯಾಗಿ ಜರುಗಲಿದೆ. ನಾಳೆ ಸಂಜೆ ಈ ಕಾರ್ಯಕ್ರಮಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಅನನ್ಯಭಟ್ ನೇತೃತ್ವದಲ್ಲಿ ಕಂಠಗಾಯನ ನಡೆಯಲಿದೆ.