ರಿಲೀಸ್ಗೂ ಮೊದಲೇ ಸಾವಿರ ಕೋಟಿ ಸಮೀಪಿಸಿತು 'ಆರ್ಆರ್ಆರ್' ಗಳಿಕೆ; ರಾಜಮೌಳಿ ಹೊಸ ದಾಖಲೆ

ನಿರ್ದೇಶಕ ಎಸ್.ಎಸ್.
'ಆರ್ಆರ್ಆರ್' ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದು ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಂಕ್ರಾಂತಿಗೆ ಸಿಗುತ್ತಿರುವ ಅತಿ ದೊಡ್ಡ ಗಿಫ್ಟ್. ಹಬ್ಬದ ಸಂದರ್ಭವಾದ್ದರಿಂದ ಚಿತ್ರ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪೋಸ್ಟರ್, ಟೀಸರ್ ಹಾಗೂ ಹಾಡುಗಳು ಚಿತ್ರದ ನಿರೀಕ್ಷೆಯನ್ನು ಈಗಾಗಲೇ ಹೆಚ್ಚಿಸಿದೆ. ಡಿಸೆಂಬರ್ 9ರಂದು ರಿಲೀಸ್ ಆಗುವ ಟ್ರೇಲರ್ ಮೇಲೆಯೂ ಹೆಚ್ಚು ಕುತೂಹಲ ಇಟ್ಟುಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದೆ. ರಿಲೀಸ್ಗೂ ಮೊದಲೇ ಈ ಚಿತ್ರ ಬರೋಬ್ಬರಿ 890 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ.
ಹೈಪ್ ಇರುವ ಸಿನಿಮಾಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳೋಕೆ ಒಟಿಟಿ ಪ್ಲಾಟ್ಫಾರ್ಮ್ಗಳು ಪ್ರಯತ್ನಿಸುತ್ತಾರೆ. ಈಗ 'ಆರ್ಆರ್ಆರ್' ಪ್ರಸಾರ ಹಕ್ಕನ್ನು ಒಟಿಟಿ ಪ್ಲಾಟ್ಫಾರ್ಮ್ ಒಂದು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಹಾಗಂದ ಮಾತ್ರಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಿಲ್ಲ ಎಂದಲ್ಲ. ಸಿನಿಮಾ ಬಿಡುಗಡೆಯಾದ ಒಂದಷ್ಟು ತಿಂಗಳ ನಂತರದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
That’s BHEEM for you…
— Jr NTR (@tarak9999) December 6, 2021
#RRRTrailerin3Days #RRRMovie #RRRTrailer pic.twitter.com/bs9DI5gR5F