ತಾಂಜೇನಿಯಾದಲ್ಲಿ ಪ್ರಯಾಣಿಕರ ವಿಮಾನ ಪತನ

ತಾಂಜೇನಿಯಾದಲ್ಲಿ ಪ್ರಯಾಣಿಕರ ವಿಮಾನ ಪತನ

ವದೆಹಲಿ: ತಾಂಜೇನಿಯಾದಲ್ಲಿ ಪ್ರಯಾಣಿಕರ ವಿಮಾನವೊಂದು ಪತನವಾಗಿದ್ದು, ಹಲವು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

49 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ವಿಕ್ಟೋರಿಯಾ ನದಿಗೆ ಬಿದ್ದಿದೆ. ಪ್ರಸ್ತುತ 26 ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಇನ್ನುಳಿದ 23 ಪ್ರಯಾಣಿಕರಿಗಾಗಿ ತೀವ್ರ ಶೋಧ ನಡೆದಿದೆ.

ವಿಮಾನ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ದೂರದಲ್ಲಿ ಈ ದುರಂತ ಸಂಭವಿಸಿದೆ ಎಂದು ಬುಕೊಬಾ ಸಿಟಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.