ಶಿಕ್ಷಣ ಪಡೆಯಲು ಅಫ್ಘಾನ್ ಹೆಣ್ಣುಮಕ್ಕಳಿಗೆ ಅವಕಾಶ ನೀಡಿದ ತಾಲಿಬಾನ್

ಶಿಕ್ಷಣ ಪಡೆಯಲು ಅಫ್ಘಾನ್ ಹೆಣ್ಣುಮಕ್ಕಳಿಗೆ ಅವಕಾಶ ನೀಡಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ 1ರಿಂದ 6ನೇ ತರಗತಿಯವರೆಗೆ ವ್ಯಾಸಂಗ ಮಾಡಲು ಹೆಣ್ಣುಮಕ್ಕಳಿಗೆ ತಾಲಿಬಾನ್ ಅನುಮತಿ ನೀಡಿದೆ. ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಆರನೇ ತರಗತಿಗಿಂತ ಕೆಳಗಿನ ಬಾಲಕಿಯರಿಗಾಗಿ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರವೊಂದನ್ನು ನೀಡಿದೆ. ವಿವಿ ಹೆಣ್ಣುಮಕ್ಕಳಿಗೆ ನಿರ್ಬಂಧ ವಿಧಿಸಿದ ಕಾರಣ, ಮುಸ್ಲಿಂ ಬಹುಸಂಖ್ಯಾತ ದೇಶಗಳು ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಖಂಡನೆ ವ್ಯಕ್ತವಾಗಿತ್ತು.