160 ರೂ. ನೀಡಿ ಖರೀದಿಸಿದ್ದ ಲಾಟರಿ ಟಿಕೆಟಿಗೆ ಬರೋಬ್ಬರಿ 16.5 ಸಾವಿರ ಕೋಟಿ ರೂಪಾಯಿ ಬಹುಮಾನ
ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ. 160 ರೂಪಾಯಿ ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಈ ಬಂಪರ್ ಬಹುಮಾನ ಬಂದಿದೆ.
ಎಡ್ವಿನ್ ಕ್ಯಾಸ್ಟ್ರೋ ಎಂಬಾತನೇ ಈ ಅದೃಷ್ಟವಂತನಾಗಿದ್ದು, ತನಗೆ ಬಹುಮಾನದ ಹಣವನ್ನು ಕೂಡಲೇ ನೀಡುವಂತೆ ಈತ ಕೇಳಿರುವ ಕಾರಣ ಬಂಪರ್ ಬಹುಮಾನದ ಅರ್ಧ ಅಂದರೆ 8 ಸಾವಿರ ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾನೆ.
ಲಾಟರಿ ಸಂಸ್ಥೆಯ ನಿಯಮದಂತೆ ಪೂರ್ಣ ಮೊತ್ತವನ್ನು ಮೂವತ್ತು ವರ್ಷಗಳ ಕಾಲ ಹಂತ ಹಂತವಾಗಿ ಪಡೆಯಬೇಕಿದ್ದು, ಒಂದೇ ಬಾರಿಗೆ ನೀಡಬೇಕೆಂದರೆ ಅರ್ಧ ಮಾತ್ರ ಕೊಡಲಾಗುತ್ತದೆ. ಹೀಗಾಗಿ ಆತ 8000 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾನೆ.