ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ `ಗುಜರಾತ್ ಮಾಡೆಲ್' ಗೊತ್ತಾಗುತ್ತೆ : ಮಾಜಿ ಸಿಎಂ ಹೆಚ್ ಡಿಕೆ

ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ `ಗುಜರಾತ್ ಮಾಡೆಲ್' ಗೊತ್ತಾಗುತ್ತೆ : ಮಾಜಿ ಸಿಎಂ ಹೆಚ್ ಡಿಕೆ

ಚಿಕ್ಕಮಗಳೂರು : ಎಲ್ಲರೂ ಗುಜರಾತ್ ಮಾಡೆಲ್ ಅಂತಾರೆ, ಅದರೆ ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ ಗುಜರಾತ್ ಮಾಡೆಲ್ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ರೀತಿಯಲ್ಲೇ ಗುಜರಾತ್ ಫೈಲ್ಸ್ ಪುಸ್ತಕ ಇದೆ.

ಗುಜರಾತ್ ಗಲಭೆ ವೇಳೆ ಏನೆಲ್ಲಾ ಆಯ್ತು ಅನ್ನೋದು ಪುಸ್ತಕದಲ್ಲಿ ಇದೆ. ಗುಜರಾತ್ ಪೈಲ್ಸ್ ಪುಸ್ತಕದಲ್ಲಿ ಗಲಭೆಯ ಸಂಪೂರ್ಣ ಮಾಹಿತಿ ಇದೆ ಎಂದರು.

ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಪ್ರಧಾನಿ ಮೋದಿ ಅವರು ಬರ್ತಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್‌ ಗೆ ಪ್ರಧಾನಮಂತ್ರಿ ಮೋದಿ ಕೊಡುಗೆ ಏನು? ರಾಜ್ಯದ ಜನರು ಭೂಮಿ ನೀಡಿದ್ದಾರೆ, ಕೆಲವರಿಗೆ ಹಣ ಇನ್ನೂ ಬಂದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ದಾರೆ.

ಇನ್ನು ಹಾಸನ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಗಾಗಿ ಫೈಟ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಾಸನ ಕ್ಷೇತ್ರದ ಟಿಕೆಟ್‌ ಟಿ-20 ಮ್ಯಾಚ್‌ ರೀತಿ ಕುತೂಹಲವಿದೆ. ಕೊನೆಯ ಓವರ್‌ ವರೆಗೂ ಕುತೂಹಲವಿರುತ್ತದೆ ಎಂದರು.

ಹಾಸನ ಕ್ಷೇತ್ರದ ಟಿಕೆಟ್‌ ಬಗ್ಗೆ ರಾಜ್ಯದ ಜನರಿಗೂ ಕುತೂಲವಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರೂ ನನ್ನ ಕುಟುಂಬಸ್ತರು. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿ ಸೋಲಿಸುತ್ತೇನೆ ಎಂದಿದ್ದೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಿದ್ದೇನೆ ಎಂದರು.

ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್‌ ನೀಡುತ್ತೇನೆ. ಹಾಸನ ಟಿಕೆಟ್‌ ವಿಚಾರವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತೇನೆ.ಆದರೆ ಈ ಸಭೆಗೆ ಹೆ.ಡಿ ರೇವಣ್ಣ ಮತ್ತು ಸ್ವರೂಪ್‌ ಕರೆದಿಲ್ಲ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹಾಸನ ಟಿಕೆಟ್‌ ಘೋಷಣೆ ಮಾಡುತ್ತೇನೆ ಅಲ್ಲಿಯವರೆಗೂ ಜನರಿಗೆ ಕೂತುಹಲವಿರಲಿದೆ ಎಂದರು.ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಪ್ರಧಾನಿ ಮೋದಿ ಅವರು ಬರ್ತಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್‌ ಗೆ ಪ್ರಧಾನಮಂತ್ರಿ ಮೋದಿ ಕೊಡುಗೆ ಏನು? ರಾಜ್ಯದ ಜನರು ಭೂಮಿ ನೀಡಿದ್ದಾರೆ, ಕೆಲವರಿಗೆ ಹಣ ಇನ್ನೂ ಬಂದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ದಾರೆ.

ಇನ್ನು ಹಾಸನ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಗಾಗಿ ಫೈಟ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಾಸನ ಕ್ಷೇತ್ರದ ಟಿಕೆಟ್‌ ಟಿ-೨೦ ಮ್ಯಾಚ್‌ ರೀತಿ ಕುತೂಹಲವಿದೆ. ಕೊನೆಯ ಓವರ್‌ ವರೆಗೂ ಕುತೂಹಲವಿರುತ್ತದೆ ಎಂದರು.

ಹಾಸನ ಕ್ಷೇತ್ರದ ಟಿಕೆಟ್‌ ಬಗ್ಗೆ ರಾಜ್ಯದ ಜನರಿಗೂ ಕುತೂಲವಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರೂ ನನ್ನ ಕುಟುಂಬಸ್ತರು. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿ ಸೋಲಿಸುತ್ತೇನೆ ಎಂದಿದ್ದೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಿದ್ದೇನೆ ಎಂದರು. ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್‌ ನೀಡುತ್ತೇನೆ. ಹಾಸನ ಟಿಕೆಟ್‌ ವಿಚಾರವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತೇನೆ.

ಆದರೆ ಈ ಸಭೆಗೆ ಹೆ.ಡಿ ರೇವಣ್ಣ ಮತ್ತು ಸ್ವರೂಪ್‌ ಕರೆದಿಲ್ಲ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹಾಸನ ಟಿಕೆಟ್‌ ಘೋಷಣೆ ಮಾಡುತ್ತೇನೆ ಅಲ್ಲಿಯವರೆಗೂ ಜನರಿಗೆ ಕೂತುಹಲವಿರಲಿದೆ ಎಂದರು.