ರಾಜ್ಯ ಸರ್ಕಾರ ಹಿಂದುತ್ವಕ್ಕೆ ಬದ್ಧ: ಸಚಿವ ಸುನಿಲ್
ಚಿಕ್ಕಮಗಳೂರು: ರಾಜ್ಯ ಸರ್ಕಾರ ಹಿಂದುತ್ವಕ್ಕೆ ಬದ್ಧವಾಗಿದ್ದು, ಹಿಂದೂಗಳ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು. ದತ್ತಾತ್ರೇಯರ ಪಾದುಕೆಗಳ ಪೂಜೆಗೆ ಹಿಂದೂ ಅರ್ಚಕರ ನೇಮಕ ಮಾಡಬೇಕು. ವರ್ಷಪೂರ್ತಿ ಪೂಜೆ ನಡೆಯಬೇಕು. ತ್ರಿಕಾಲ ಪೂಜೆ ನೆರವೇರಬೇಕು ಎಂಬುದು ಹಿಂದೂ ಸಂಘಟನೆ ಸೇರಿದಂತೆ ನಮ್ಮೆಲ್ಲರ ಹಲವು ವರ್ಷಗಳ ಬೇಡಿಕ. ಬಿಜೆಪಿ ಸರ್ಕಾರ ಹಿಂದೂ ಅರ್ಚಕರ ನೇಮಕಾತಿ ಮಾಡಿ ಹಿಂದೂಗಳ ಮನಸ್ಸಿಗೆ ಭಾವನೆ ಈಡೇರಿಸಿದೆ ಎಂದರು.