ಡಿ.9ರಂದು ಕಿಷ್ಕಿಂದಾ ಅಂಜನಾದ್ರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌‌ ಭೇಟಿ

ಡಿ.9ರಂದು ಕಿಷ್ಕಿಂದಾ ಅಂಜನಾದ್ರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌‌ ಭೇಟಿ

ಗಂಗಾವತಿ: ಕಿಷ್ಕಿಂದಾ ಅಂಜನಾದ್ರಿಗೆ ಡಿ.9ರಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌‌ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಟ್ಟದ ಬಲಭಾಗದಲ್ಲಿರುವ ಪಾದ ಶ್ರೀ ಆಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಕಚೇರಿ ಶಿಷ್ಟಾಚಾರ ಸೇರಿ ಅಗತ್ಯವಾದ ಭದ್ರತೆ ಸೌಕರ್ಯಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತ ಹಾಗೂ ಅಂಜನಾದ್ರಿ ದೇವಾಲಯ ಕಮಿಟಿಗೆ ಸೂಚಿಸಿದೆ.