ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ನಡೆಸದ ಇಲಾಖೆಗಳಿಲ್ಲ: ಕಾಂಗ್ರೆಸ್

ಬೆಂಗಳೂರು: ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ನಡೆಸದ ಇಲಾಖೆಗಳಿಲ್ಲ! ಎಂದು ಕಾಂಗ್ರೆಸ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಡವರ ಬದುಕಿಗೆ ಆಸರೆಯಾಗಿದ್ದ ಅನ್ನಭಾಗ್ಯವನ್ನು ಕನ್ನಭಾಗ್ಯವಾಗಿ ಪರಿವರ್ತಿಸಿದ್ದೇ ರಾಜ್ಯ ಬಿಜೆಪಿ ಸಾಧನೆ. ರಾಜ್ಯಾದ್ಯಂತ ಅಕ್ಕಿ ಕಳ್ಳತನ ವ್ಯಾಪಕವಾಗಿದ್ದರೂ ನಿಯಂತ್ರಿಸುವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಕಳ್ಳರ ಸರ್ಕಾರದಲ್ಲಿ ಕಳ್ಳರದ್ದೇ ಸಾಮ್ರಾಜ್ಯ! ಎಂದು ಕಾಂಗ್ರೆಸ್ ಕುಟುಕಿದೆ.