ನಾಗರಿಕರ ನೆಮ್ಮದಿಯ ಜೀವನಕ್ಕೆ ಪೊಲೀಸರ ಸೇವೆಯೇ ಕಾರಣ..-ಡಾ.ಕೆ.ಬಿ.ಗುಡಸಿ
ನಾಡಿನ ಜನತೆ,ಮಕ್ಕಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೆ ಪೊಲೀಸ್ ಮತ್ತು ಎಲ್ಲಾ ರಕ್ಷಣಾ ತುಕಡಿಗಳ ನಿರಂತರ ಕರ್ತವ್ಯಪರತೆಯೇ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿಪರತೆಗೆ ನಾಡಿನ ನಾಗರಿಕರು ಕೃತಜ್ಞರಾಗಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಹೇಳಿದ್ರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಇಂದು ಜಿಲ್ಲಾ ಪೊಲೀಸ್ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.. ಸಮಾಜದ ಒಳಿತು ಮತ್ತು ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವ ಪೊಲೀಸರನ್ನು ಕೆಲವು ಮಾಧ್ಯಮಗಳು ಮತ್ತು ಸಿನಿಮಾಗಳಲ್ಲಿ ಅಪಹಾಸ್ಯದ ರೀತಿಯಲ್ಲಿ ಬಿಂಬಿಸುತ್ತಿರುವುದು ಅಕ್ಷಮ್ಯ ಮತ್ತು ಅನ್ಯಾಯವಾಗಿದೆ.ಇದನ್ನು ತಡೆಯಲು ಒತ್ತಾಯಿಸಿ. ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.ಪೊಲೀಸ್ ಹುತಾತ್ಮರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಿ,ಗೌರವಿಸಬೇಕು ಎಂದರು. ಇನ್ನು ಗಾಳಿಯಲ್ಲಿ 3 ಸುತ್ತು ಕುಶಾಲ ತೋಪು ಹಾರಿಸಿ,ಪೊಲೀಸ್ ವಾದ್ಯಮೇಳದಲ್ಲಿ ಸುಶ್ರಾವ್ಯವಾಗಿ ರಾಷ್ಟ್ರಗೀತೆ ನುಡಿಸಿ ,ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ರೀತ್ ಅರ್ಪಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಕೋವಿಡ್ನಿಂದ ನಿಧನರಾದ ಧಾರವಾಡದ ಆರ್ಎಸ್ಐ ಜಿ.ಎಂ.ಹೆಗಡೆ ಅವರ ಧರ್ಮಪತ್ನಿಗೆ ಪುಸ್ತಕ ನೀಡಿ ಗೌರವಿಸಲಾಯಿತು.ಪರೇಡ್ ಕಮಾಂಡರ್ ಆರ್ಪಿಐ ಬಸವರಾಜ ಚನ್ನಮ್ಮವರ ನೇತೃತ್ವದಲ್ಲಿ ಆಕರ್ಷಕ ಮತ್ತು ಶಿಸ್ತಿನ ಪಥ ಸಂಚಲನ, ಹುತಾತ್ಮರಿಗೆ ಗೌರವ, ಪೊಲೀಸ್ ವಾದ್ಯಮೇಳ ಜರುಗಿತು.