ಖಾಸಗಿ ಶಾಲೆ ಆರ್ಭಟದಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆಯನ್ನು ಒಂದು ದಶಕದ ಬಳಿಕ ಗ್ರಾಮಸ್ಥರು ತೆರೆದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಖಾಸಗಿ ಶಾಲೆಗಳ ಭರಾಟೆಯ ನಡುವೆ ವಿದ್ಯಾರ್ಥಿಗಳ ಕೊರತೆಯಿಂದಾಗಿ 10 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಸರ್ಕಾರಿ ಶಾಲೆಯನ್ನು ಪುನಃ ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ದುಂಬಾಲು ಬಿದ್ದ ಗ್ರಾಮಸ್ಥರು, ಶಾಲೆಗೆ ಮರುಜೀವ ನೀಡಿದ ಸಂತಸದಲ್ಲಿದ್ದಾರೆ. ಈ ಮೂಲಕ ಮತ್ತೆ ಶಾಲಾ ಆವರಣಲ್ಲಿ ಮಕ್ಕಳ ಚಿಲಿಪಿಲಿ ಕಲರವ ಕೇಳುವಂತಾಗಿದೆ.
ಅಂದಾಜು 30 ಕುಟುಂಬಗಳು ಯರೇಕಟ್ಟೆ ಗ್ರಾಮದಲ್ಲಿ ವಾಸಿಸುತ್ತಿವೆ. ಅಕ್ಕಪಕ್ಕದ ಗ್ರಾಮಗಳ ಮಕ್ಕಳು ಸಹ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾದ ಪೋಷಕರು, ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕತೊಡಗಿದ್ದರು. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು