ಸಮವಸ್ತ್ರಗಳನ್ನೇ ಕೊಡಲಾಗದವರು ಶಾಲೆಗಳನ್ನು ನಿರ್ಮಿಸಲು ಸಾಧ್ಯವೇ?: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: 'ಪಠ್ಯ ಪುಸ್ತಕ, ಸಮವಸ್ತ್ರಗಳನ್ನೇ ಕೊಡಲಾಗದವರು ಶಾಲೆಗಳನ್ನು ನಿರ್ಮಿಸಲು ಸಾಧ್ಯವೇ? ಬಿಜೆಪಿಯ ಆದ್ಯತೆ ಶಾಖೆಗಳು ಹೊರತು ಶಾಲೆಗಳಲ್ಲ' ಎಂದು ಕಾಂಗ್ರಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ಹೆಚ್ಚಿಸುತ್ತೇವೆ ಎಂದಿತ್ತು ಬಿಜೆಪಿ.
''ಅರ್ಧ ವರ್ಷ ಕಳೆದರೂ ಪಠ್ಯ ಪುಸ್ತಕ ನೀಡಲಾಗದ ಶಿಕ್ಷಣ ಸಚಿವ ಧ್ಯಾನ ಮಾಡಿಸಲು ಮುಂದಾಗಿದ್ದಾರೆ! ಓದಲು ಪುಸ್ತಕವಿಲ್ಲದಾಗ ವಿದ್ಯಾರ್ಥಿಗಳಿಗೆ ಧ್ಯಾನ, ಭಜನೆ ಮಾಡುವುದೊಂದೇ ದಾರಿ! ಪಠ್ಯಪುಸ್ತಕ, ಶೂ, ಸಾಕ್ಸ್, ಯುನಿಫಾರ್ಮ್‌ಗಳನ್ನು ನೀಡಲು ಯೋಗ್ಯತೆ ಇಲ್ಲದ ಸಚಿವ ಬಿ.ಸಿ ನಾಗೇಶ್ ಎಂಬ ಅಸಮರ್ಥ ಸಚಿವರ ಕೈಯಲ್ಲಿ ಮಕ್ಕಳ ಭವಿಷ್ಯಕ್ಕೆ ಕತ್ತಲಾವರಿಸಿದೆ'' ಎಂದು ಕಾಂಗ್ರೆಸ್ ಕಿಡಿಕಾರಿದೆ.