ಗ್ರಾಹಕರೇ ಗಮನಿಸಿ; 4 ದಿನ ಬ್ಯಾಂಕ್ ಬಂದ್
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಜ.30ರಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು ಘೋಷಿಸಿದೆ. ಜನವರಿ 28 ತಿಂಗಳ ನಾಲ್ಕನೇ ಶನಿವಾರವಾಗಿರುವುದರಿಂದ, ಈ ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಜ. 29 ಭಾನುವಾರದಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇದೆ. ಜ.30 & 31 ರಂದು ಬ್ಯಾಂಕ್ ಯೂನಿಯನ್‌ಗಳು ಮುಷ್ಕರ ನಡೆಸುವುದರಿಂದ 4 ದಿನ ಗ್ರಾಹಕರು ಸಮಸ್ಯೆ ಎದುರಿಸಬೇಕಾಗಬಹುದು.