ಡ್ರಗ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಡ್ರಗ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಡ್ರಗ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಮುಂಬೈ: ಬಾಲಿವುಡ್ ಡ್ರಗ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಎನ್‍ಸಿಬಿ ಅಧಿಕಾರಿಗಳು ಬಾಲಿವುಡ್‌ ನಟ ಅರ್ಮಾನ್ ಕೋಹ್ಲಿ ಅವರನ್ನು ಬಂಧಿಸಿದ್ದಾರೆ.
ಬಾಲಿವುಡ್ ಡ್ರಗ್ ಕೇಸ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಎನ್‍ಸಿಬಿ ಅಧಿಕಾರಿಗಳು ಅರ್ಮಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರ ಮನೆಯಲ್ಲಿದ್ದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು.
ಇಂದು ಅರ್ಮಾನ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ ಅಧಿಕಾರಿಗಳನ್ನು ಕೊನೆಗೆ ಅವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಅರ್ಮಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ನಿಷೇಧಿತ ಕೋಕೆನ್ ಮಾದಕ ದ್ರವ್ಯ ಪತ್ತೆಯಾಗಿತ್ತು ಎನ್ನಲಾಗಿದೆ.
ನಟ ಅರ್ಮಾನ್ ಕೊಹ್ಲಿ ಅವರನ್ನು ಬಂಧಿಸಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಎನ್‍ಸಿಬಿ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಎನ್‍ಸಿಬಿ ಅಧಿಕಾರಿಗಳು ಡ್ರಗ್ ಪೆಡ್ಲರ್ ಅಜಯ್ ರಾಜು ಸಿಂಗ್ ಎಂಬಾತನನ್ನು ಎನ್‍ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅರ್ಮಾನ್‌ ಕೊಹ್ಲಿ ಬಂಧನಕ್ಕೆ ಒಂದು ದಿನ ಮೊದಲು, ಎನ್‌ಸಿಬಿಯು ಟಿವಿ ನಟ ಗೌರವ್ ದೀಕ್ಷಿತ್ ಅವರನ್ನು ಬಂಧಿಸಿತ್ತು.