ಗ್ರಾಮೀಣ ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಮೇಯರ್ ಸ್ಥಾನ ನೀಡಬೇಕು ಶಾಸಕ ಅಮೃತ ದೇಸಾಯಿ | Amrut Desai | Dharwad |
ಈ ಬಾರಿ ಧಾರವಾಡ-ಹು ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರ 5 ಸ್ಥಾನಗಳು ಬಂದಿವೆ. ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಮೇಯರ್ ಸ್ಥಾನ ಒದಗಿ ಬಂದಿಲ್ಲ. ಹಾಗಾಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಪಾಲಿಕೆಯ ಸದಸ್ಯರಿಗೆ ಮೇಯರ್ ಮಾಡಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಧಾರವಾಡ ಗ್ರಾಮೀಣ ಕೇತ್ರ ವ್ಯಾಪ್ತಿಯಲ್ಲಿ ಒಟ್ಟು ಒಂಬತ್ತು ಪಾಲಿಕೆ ಸ್ಥಾನಗಳನ್ನು ಹೊಂದಿವೆ. ಅದರಲ್ಲಿ ಐದು ಸ್ಥಾನ ಗೆಲುವು ಸಾಧಿಸಿದ್ದಾರೆ. ಜೊತೆಗೆ ಉಳಿದ ನಾಲ್ಕು ಕ್ಷೇತ್ರದಲ್ಲಿಯು ಎದುರಾಳಿ ಪಕ್ಷಕ್ಕೆ ಬಾರಿ ಪೈಪೋಟಿಯನ್ನು ನಮ್ಮ ಪಕ್ಷದ ಅಭ್ಯರ್ಥಿಗಳು ನೀಡಿದ್ದಾರೆ. ಮೇಯರ್ ಸ್ಥಾನದ ಕುರಿತು ನಮ್ಮ ಪಕ್ಷದ ವರಿಷ್ಠರಿಗೆ ಒತ್ತಾಯ ಮಡುತ್ತೇನೆ. ಈಗಾಗಲೇ ಬಿಜೆಪಿ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವ ಮೂಲಕ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಾಲಿಕೆಯ ಚುಕ್ಕಾಣಿಯನ್ನು ಬಿಜೆಪಿ ಪಕ್ಷವೇ ಹಿಡಿಯುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ಮೇಯರ್ ಸ್ಥಾನ ನಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ನೀಡುವ ಕುರಿತು ಸಿಎಂ ಬೊಮ್ಮಯಿ ಅವರ ಗಮನಕ್ಕೂ ತರುತ್ತನೆ ಎಂದರು.