ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಬೇರೆ ರಾಷ್ಟ್ರಗಳಿಗಿಂತ ಉತ್ತಮವಾಗಿದೆʼ: ಲಸಿಕೆ ತಯಾರಕ ಆದಾರ್ ಪೂನವಾಲ್ಲಾ

ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಬೇರೆ ರಾಷ್ಟ್ರಗಳಿಗಿಂತ ಉತ್ತಮವಾಗಿದೆʼ: ಲಸಿಕೆ ತಯಾರಕ ಆದಾರ್ ಪೂನವಾಲ್ಲಾ

ಪುಣೆ (ಮಹಾರಾಷ್ಟ್ರ): ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟವನ್ನು ಶ್ಲಾಘಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಾಲ್ಲಾ(Adar Poonawalla) ಅವರು, ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಪುಣೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. 'ಪ್ರತಿಯೊಬ್ಬರೂ ಇಂದು ಭಾರತದತ್ತ ನೋಡುತ್ತಿದ್ದಾರೆ. ಅದಕ್ಕೆ ನಮ್ಮ ಕೋವಿಡ್ ನಿರ್ವಹಣೆಯು ಒಂದು ಪ್ರಮುಖ ಕಾರಣವಾಗಿದೆ. ಸರ್ಕಾರ, ಆರೋಗ್ಯ ಕಾರ್ಯಕರ್ತರು ಮತ್ತು ವೈರಸ್ ಅನ್ನು ಪಳಗಿಸುವ ಸಾಮಾನ್ಯ ಗುರಿಯಿಂದಾಗಿ ಇದು ಸಾಧ್ಯವಾಯಿತು' ಎಂದು ಅವರು ಹೇಳಿದರು.

'ನಾನು ಪ್ರಪಂಚವನ್ನು ನೋಡುತ್ತಿದ್ದೇನೆ. ಅದರಲ್ಲಿ ಭಾರತದಲ್ಲಿ ಕೋವಿಡ್ ಪರಿಸ್ಥಿತಿಯು ಎಲ್ಲಕ್ಕಿಂತ ಉತ್ತಮವಾಗಿದೆ. ನಾನು ಪ್ರತಿಯೊಬ್ಬರನ್ನು ಭಾರತದಲ್ಲಿಯೇ ಇರುವಂತೆ ಒತ್ತಾಯಿಸುತ್ತೇನೆ' ಎಂದು ಹೇಳಿದರು.

ಏತನ್ಮಧ್ಯೆ, ನಡೆಯುತ್ತಿರುವ ಜಾಗತಿಕ ಕೋವಿಡ್ ಉಲ್ಬಣದ ಮಧ್ಯೆ ಭಯಭೀತರಾಗಬೇಡಿ. ಜಾಗರೂಕರಾಗಿರಿ ಮತ್ತು ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.