ತೃಣಮೂಲ ಸೇರ್ಪಡೆಯಾದ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್

ತೃಣಮೂಲ ಸೇರ್ಪಡೆಯಾದ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್
ತೃಣಮೂಲ ಸೇರ್ಪಡೆಯಾದ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್
ಕೋಲ್ಕತ್ತಾ: ಕಾಂಗ್ರೆಸ್ ತೊರೆದ ನಂತರ ಅಸ್ಸಾಂ ಮಾಜಿ ಸಂಸದೆ ಸುಷ್ಮಿತಾ ದೇವ್ ಆ.೧೬ ರಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಕೋಲ್ಕತ್ತಾದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಸುಷ್ಮಿತ ದೇವ್ ಟಿಎಂಸಿ ಗೆ ಸೇರ್ಪಡೆಯಾಗಿದ್ದಾರೆ. ಸುಷ್ಮಿತ ದೇವ್ ಕಾಂಗ್ರೆಸ್ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು. ಆ.೧೫ ರಂದು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದರು.
ಟಿಎಂಸಿಯ ಹಿರಿಯ ನಾಯಕರೊಬ್ಬರು ಸುಷ್ಮಿತ ದೇವ್ ಅವರ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಷ್ಮಿತ ದೇವ್ ಅವರ ರಾಜೀನಾಮೆ ಬಗ್ಗೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷ ಭುಪೇನ್ ಬೋರಾ ಪ್ರತಿಕ್ರಿಯೆ ನೀಡಿದ್ದು, ಮಾಜಿ ಸಂಸದೆ ಸುಷ್ಮಿತ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಆದ್ದರಿಂದ ಅವರು ಪಕ್ಷ ತೊರೆದಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷದ ಹೈಕಮಾಂಡ್ ಅವರಿಗೆ ಸಾಕಷ್ಟು ಮಹತ್ವ ನೀಡಿತ್ತು. ಆದರೆ ರಾಜಕೀಯ ಕಾರಣಗಳಿಂದಾಗಿ ಅವರು ಪಕ್ಷಾಂತರ ಮಾಡಿರಬಹುದು ಎಂದು ಭುಪೇನ್ ಬೋರಾ ಹೇಳಿದ್ದಾರೆ. ಸಿಲ್ಚಾರ್ ನಲ್ಲಿ ಪಕ್ಷದವನ್ನು ಮರು ನಿರ್ಮಾಣ ಮಾಡುವುದಕ್ಕೆ ಆಕೆಯಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು ಎಂದು ಭುಪೇನ್ ಬೋರಾ ಅವರು ಸುಷ್ಮಿತ ದೇವ್ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.