ಇನ್ಮುಂದೆ 65 ವರ್ಷ ದಾಟಿದ ಮಾಲೀಕರ ನ್ಯಾಯಬೆಲೆ ಅಂಗಡಿ 'ಲೈಸನ್ಸ್' ರದ್ದು!

ಇನ್ಮುಂದೆ 65 ವರ್ಷ ದಾಟಿದ ಮಾಲೀಕರ ನ್ಯಾಯಬೆಲೆ ಅಂಗಡಿ 'ಲೈಸನ್ಸ್' ರದ್ದು!

ಬೆಂಗಳೂರು: 65 ವರ್ಷ ವಯೋಮಿತಿ ದಾಟಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಡಿಜಿಟಲೀಕರಣಕ್ಕಾಗಿ 65 ವರ್ಷ ಮೇಲ್ಪಟ್ಟ ರೇಷನ್ ಅಂಗಡಿ ಮಾಲೀಕರ ಪರವಾನಗಿ ರದ್ದು ಮಾಡುವ ಸಂಬಂಧ ಗಂಭೀರ ಪ್ರಯತ್ನಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರಲಿದೆ. ಬೆಳಗಾವಿ ವಿಧಾನಮಂಡಲದ ಅಧಿವೇಶನದ ನಂತರ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.