ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆಯಂಬುಲೆನ್ಸ್' ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ!

ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆಯಂಬುಲೆನ್ಸ್' ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ!

ಬೆಂಗಳೂರು : ರಾಜ್ಯದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ 108 ಆಯಂಬುಲೆನ್ಸ್ ಸೇವೆ ಮತ್ತೆ ಕೈಕೊಟ್ಟಿದ್ದು, ಸೇವೆಗಾಗಿ ಸಾರ್ವಜನಿಕರು ಕರೆ ಮಾಡಿದ್ರೆ ಸ್ಪಂದನೆ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.

ಹೌದು, 108 ಆಯಂಬುಲೆನ್ಸ್ ಸೇವೆಯಲ್ಲಿ ಮತ್ತೆ ವ್ಯತ್ಯಯವಾಗಿದ್ದು, 108 ಕ್ಕೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಸೋಮವಾರ ಸಂಜೆಯಿಂದಲೂ ಕರೆ ಸ್ವೀಕರಿಸದಿರುವ ಸಮಸ್ಯೆಯಿದ್ದು, ಮಂಗಳವಾರ ತಡರಾತ್ರಿಯವರೆಗೂ ಈ ಸಮಸ್ಯೆ ಸುಧಾರಿಸಿಲ್ಲ.ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ರೋಗಿಗಳು ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ರಾತ್ರಿಯಿಂದ 108 ಆಯಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಕಂಡುಬಂದಿದೆ.ರಾಜ್ಯದಲ್ಲಿ ಆಯಂಬುಲೆನ್ಸ್ ಸೇವೆಯನ್ನು ಜಿವಿಕೆ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದು, ತನ್ನ ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ಹಾಜರಾಗಿಲ್ಲದಿರುವುದರಿಂದ ಕರೆ ಸ್ವೀಕರಿಸಲು ಸಿಬ್ಬಂದಿ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.