ತಾಪಂ ಕಚೇರಿ ಉದ್ಘಾಟಿಸಿದ ಸಚಿವ ಈಶ್ವರಪ್ಪ
ಬೆಂಗಳೂರು ಪೂರ್ವ ತಾಲ್ಲೂಕಿನ ನೂತನ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡವನ್ನು ಸಚಿವ ಈಶ್ವರಪ್ಪ , ಸಚಿವ ಅರವಿಂದ ಲಿಂಬಾವಳಿ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ ....... ಸರ್ಕಾರದಿಂದ ಒಂದು ರೂಪಾಯಿಯನ್ನೂ ಪಡೆಯದೇ ಸಂಪೂರ್ಣವಾಗಿ ಸಿಎಸ್ ಆರ್ ಫಂಡ್ ಅನ್ನು ಬಳಕೆ ಮಾಡಿಕೊಂಡು ಮಹದೇವಪುರ ಕ್ಷೇತ್ರ ಬೊಮ್ಮೇನಹಳ್ಳಿ ಗೇಟ್ ಬಳಿ ಸುಂದರವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ನೂತನ ತಾಲ್ಲೂಕು ಕಛೇರಿ ನಿರ್ಮಾಣದಿಂದ ಗ್ರಾಮೀಣ ಭಾಗದ ಜನರ ಬದುಕ ಹಸನಾಗಲು ಈ ಕಟ್ಟಡ ಉದ್ಘಾಟನೆ ಮಾಡಿರುವು ಸಂತಸ ವಿಷಯ , ಜನರ ಹಾಗೂ ಅಧಿಕಾರಿಗಳ ಕೊಂಡಿಯಾಗಿ ಈ ಕಛೇರಿ ಕಾರ್ಯ ನಿರ್ವಹಿಸಲಿದೆ, ಸರ್ಕಾರದಿಂದ ಹಣ ತೆಗೆದುಕೊಳ್ಳದೇ ನಿರ್ಮಾಣ ಮಾಡಲಾಗಿದೆ ಎಂದರು.