ಸಿದ್ದರಾಮಯ್ಯ ವಿರುದ್ದ ಬಿ.ಎಸ್. ವೈ ಗರಂ
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರತಿದ್ದಾರೆ ಎಂದು ಮಾಜಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾತನಾಡಿರೋ ಮಾಜಿ ಸಿ.ಎಮ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಇತ್ತೀಚೆಗೆ ಏನೇನೋ ಮಾತಾಡ್ತಿದಾರೆ.ಅವರು ವಿರೋಧ ಪಕ್ಷದ ನಾಯಕ ಅನ್ನೋದನ್ನೆ ಮರೆತಿದ್ದಾರೆ.ನಮ್ಮ ಸರ್ಕಾರ ಅಲ್ಪ ಸಂಖ್ಯಾತರ ವಿರೋಧಿ ಅಲ್ಲ.ನನ್ನ ಅವಧಿಯಲ್ಲಿ ಅಲ್ಪ ಸಂಖ್ಯಾತರ ಪರ ಅನೇಕ ಕೆಲಸ ಮಾಡಿದ್ದೇವೆ ಎಂದ ಯಡಿಯೂರಪ್ಪ ತಿಳಿಸಿದರು.ಇದೇ ವೇಳೆ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ಕೊಟ್ಟರು.ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಒಳ್ಳೆ ಕೆಲಸ ಮಾಡ್ತಿದೆ. ಇದನ್ನ ನಾನು ಹೇಳತಿಲ್ಲ ಜನ ಹೇಳತಿದ್ದಾರೆ ಎಂದರು. ಕಾಂಗ್ರೆಸ ನಾಯಕ ಸುರ್ಜೆವಾಲ್ ಏನೇನೋ ಹೇಳುತ್ತಿದಾರೆ ಎಂದ ಯಡಿಯೂರಪ್ಪದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು. ಸುರ್ಜೆವಾಲ್ ಮನಬಂದಂತೆ ಮಾತಾಡಿದ್ರೆ ಕರ್ನಾಟಕದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು. ಉಪಚುನಾವಣೆ ನಡೆಯುತ್ತಿರೋ ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ವಾತಾವರಣ ಚೆನ್ನಾಗಿದೆ. ಎರಡೂ ಕಡೆ ನಾವು ಗೆಲ್ತೀವಿ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮಾಡಿದ ಅಭಿವೃದ್ಧಿ ಕೆಲಸಗಳಿಂದಾಗಿ ಮತದಾರರು ನಮ್ಮ ಪರ ಇದ್ದಾರೆ ಎಂದರು. ಸಲೀಂ ಹಾಗೂ ಉಗ್ರಪ್ಪ ವಿಡಿಯೋ ವಿಚಾರದ ನಾನು ಏನೂ ಮಾತನಾಡೋದಿಲ್ಲ. ಅವರ ಬ್ರಷ್ಟಾಚಾರ ಅವರಿಂದಲೇ ಬಯಲಾಗಿದೆ ಎಂದು ಯಡಿಯೂರಪ್ಪ ಜಾರಿಕೊಂಡರು.