ಈದ್ ಮಿಲಾದ್ ಹಬ್ಬದಪ್ರಯುಕ್ತ ಸಾದಾತ್ ಯೂತ್ ಫೌಂಡೇಶನ್ ವತಿಯಿಂದ ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು ಹಣ್ಣು ಮೊಟ್ಟೆ ವಿತರಣೆ
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾದಾತ್ ಯೂತ್ ಪೌಂಡೇಷನ್ ಸಂಘಟನೆಯ ಮುಖಂಡ ಸಯ್ಯದ್ ಆಶಮ್ ಹಾಗು ಸಹೋದರರು, ಕೋಲಾರ ನಗರದ ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ಆಶ್ರಮಕ್ಕೆ ಬಾಳೆಹಣ್ಣು, ಮೊಟ್ಟೆ, ಬಿಸ್ಕೆಟ್ ವಿತರಣೆ ಮಾಡುವ ಮೂಲಕ, ಈದ್ ಮಿಲಾದ್ ಹಬ್ಬವನ್ನ ಮಾದರಿಯಾಗಿ ಆಚರಿಸಿದರು, ಕಳೆದ 20 ವರ್ಷಗಳಿಂದ ಈದ್ ಮಿಲಾದ್ ಸೇರಿದಂತೆ ಹಲವು ಹಬ್ಬದ ಸಂಧರ್ಭದಲ್ಲಿ ಆಹಾರ ಪದಾರ್ಥ , ತಿಂಡಿ ತಿನಿಸು ದಾನವಾಗಿ ನೀಡುವುದನ್ನು, ಸಯ್ಯದ್ ಆಶಮ್ ಅವರು ರೂಡಿಸಿಕೊಂಡು ಬಂದಿದ್ದಾರೆ, ಬಡತನವಿದ್ದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಇವರ ಕಾರ್ಯಕ್ಕೆ ಆಶ್ರಮದ ಸಿಬ್ಬಂದಿಗಳು ಧನ್ಯವಾದ ಅರ್ಪಿಸಿದ್ದಾರೆ, ಮಕ್ಕಳಿಗೆ ಆಹಾರ ಪಧಾರ್ಥ ವಿತರಣೆ ನಂತರ ಮಾತನಾಡಿದ ಸಯ್ಯದ್ ಆಶಾಮ್ ಅವರು, ಹಬ್ಬದ ದಿನಗಳಲ್ಲಿ ಆಡಂಬರದ ಊಟ ಮಾಡುವ ಜನರು ಇದ್ದಾರೆ, ಆದರೆ ಇಂತಹ ಶ್ರೇಷ್ಠ ದಿನಗಳಂದು ಬಡವರಿಗೆ ದಾನ ಧರ್ಮ ಮಾಡುವುದನ್ನು ಎಲ್ಲರು ರೂಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.