ದತ್ತಪಾದುಕೆ ಪೂಜೆಗೆ ಅವಕಾಶ ನಿರಾಕರಣೆ; ಗುಹೆಯೊಳಗೆ ಧರಣಿ ಕುಳಿತ ಕಾಳಿ ಸ್ವಾಮಿ 

ಚಿಕ್ಕಮಗಳೂರು

ಚಿಕ್ಕಮಗಳೂರು ತಾಲೂಕಿನ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ಪೂಜೆಗೆ ಅವಕಾಶ ನಿರಾಕರಣೆ ಹಿನ್ನೆಲೆ ದತ್ತಪೀಠದ ಗುಹೆಯೊಳಗೆ ಪಾದುಕೆ ಎದುರು ಕಾಳಿ ಸ್ವಾಮಿ ಧರಣಿ ಮಾಡುತ್ತಿದ್ದಾರೆ. ದತ್ತಗುಹೆಯೊಳಗೆ ಸ್ವಾಮಿ ಮತ್ತು ಶ್ರೀರಾಮ ಸೇನಾ ಕಾರ್ಯಕರ್ತರು ಭಜನೆಗೆ ಮುಂದಾಗಿದ್ದರು. ದತ್ತಪಾದುಕೆ ಪೂಜೆಗೆ ಅವಕಾಶ ನೀಡಲಿಲ್ಲ. ಆದ ಕಾರಣ ಧರಣಿ ಕುಳಿತ ಅವರು ಅನುಮತಿ ನೀಡುವವರೆಗೂ ಹೊರ ಹೋಗಲ್ಲ ಎಂದು ಪಟ್ಟುಹಿಡಿದಿದ್ದು, ಋಷಿಕುಮಾರ ಸ್ವಾಮಿ ಪೂಜೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶ್ರೀ ರಾಮಸೇನೆ ರಾಜ್ಯ ಸಂಚಾಲಕ ಗಂಗಾಧರ ಕುಲಕರ್ಣಿ ಸೇರಿದಂತೆ ಕಾರ್ಯಕರ್ತರು ಹೋರಾಟಕ್ಕೆ ಸಾಥ್ ನೀಡಿದ್ದಾರೆ.