ಕನ್ನಡ ರಾಜ್ಯೋತ್ಸವ ಆಚರಣೆಯ ಜೋತೆಗೆ ಸಮಸ್ಯೆಗಳಿಗೆ ಸ್ಪಂದಿಸಿದ :- ಶಾಸಕ ಖಂಡ್ರೆ

ಕಲ್ಯಾಣ ಕರ್ನಾಟಕದ ಗಡಿನಾಡು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ತಹಶಿಲ್ದಾರ ಕಚೇರಿ ಹಾಗೂ ಗೃಹರಕ್ಷಕ ದಳ ಕಚೇರಿಯಲ್ಲಿ ಶಾಸಕ ಈಶ್ವರ ಖಂಡ್ರೆ ಹಸ್ತದಿಂದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಗೃಹರಕ್ಷಕ ದಳ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಶಾಸಕರು ಕಚೇರಿಯನ್ನು ವೀಕ್ಷಿಸಿದರು ಇಲ್ಲಿ ಹಲವಾರು ಸಮಸ್ಯೆಗಳ ಕಂಡುಬಂದಿದ್ದು ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸರ್ಕಾರ ಗ್ರಹರಕ್ಷಕ ದಳ ಸಿಬ್ಬಂದಿಗಳಿಗೆ ತೆಗೆದುಕೊಂಡಿದ್ದು ಕೇವಲ ಗೌರವಧನದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ ಇರಲಿ , ಚುನಾವಣೆಗಳು ಇರಲಿ, ಪ್ರತಿ ಕೆಲಸಕ್ಕೂ ಗ್ರಹರಕ್ಷಕ ದಳದವರೆ ಸೇವೆ ಮಾಡುತ್ತಿದ್ದು ಸರಕಾರ ಇವರನ್ನು ಕೈ ಬಿಟುತ್ತಿದ್ದಾರೆ ಎಂಬ ವಿಷಯ ತಿಳಿದು ಅತ್ಯಂತ ದುಃಖದಾಯಕವಾದ ಘಟನೆಯಾಗಿದೆ ಗೃಹರಕ್ಷಕ ಸಿಬ್ಬಂದಿಗಳಿಗೆ ತಮ್ಮ ಸ್ವಂತ ಆಫೀಸ್ ಇಲ್ಲ ಹಾಗೂ ಇರಲು ಸ್ವಂತ ಮನೆಯೂ ಇಲ್ಲ ಎಂದು ಗೃಹರಕ್ಷಕ ಸಿಬ್ಬಂದಿಯ ಘಟಕದ ಅಧಿಕಾರಿಯಾದ ಸುಧಾಕರ್ ಕರ್ಕರೆ ನಮಗೆ ಮನೆ ವ್ಯವಸ್ಥೆ ಹಾಗೂ ಆಫೀಸ್ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಶಾಸಕರಿಗೆ ಸಿಬ್ಬಂದಿ ಒಬ್ಬರು ಮನವಿ ಮಾಡಿದರು. ಕರ್ತವ್ಯ ತಾಲೂಕಿನ ಹಜನಾಳ ಗ್ರಾಮದ ಅರಣ್ಯ ಇಲಾಖೆಯಲ್ಲಿ ಬೆಂಕಿ ನಂದಿಸುವಾಗ ಕರ್ತವ್ಯದ ಮೇಲೆ ಕೆಲಸ ನಿರ್ವಹಿಸುತ್ತಿರುವಾಗ ಸಿದ್ದಪ್ಪ ತಂದೆ ಸಂಗಪ್ಪ ಎಂಬ ಗ್ರಹರಕ್ಷಕ ಸಿಬ್ಬಂದಿಯ ಕಣ್ಣಿಗೆ ಗಾಯವಾಗಿದ್ದು ಕಣ್ಣು ಕಾಣದಂತಾಗಿದ್ದು ಸಂಬಂಧಪಟ್ಟ ಇಲಾಖೆಯು ತಕ್ಷಣ ಪರಿಹಾರ ಧನ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಹಶಿಲ್ದಾರ ಕೀರ್ತಿ ಚಾಲಕ, ಡಿವೈಎಸ್ಪಿ ಪೃಥ್ವಿಕ್ ಶಂಕರ್ ,ಸುಧಾಕರ್ ಕರ್ಕರೆ, ಸಿದ್ರಾಮ್ ಮರೆ ,ಹಲವಾರು ಗಣ್ಯರು ಹಾಜರಿದ್ದರು..