ಸಿದ್ದರಾಮಯ್ಯನವರ ಹೆಸರನ್ನ ಪಾಕಿಸ್ತಾನದಲ್ಲಿ ಹೇಳಬಹುದು ಅಷ್ಟೇ ಸಿ.ಟಿ ರವಿ ವ್ಯಂಗ್ಯ | Chikmagalur |

ಭಾರತದ ಪ್ರಧಾನಿ ಆಫ್ರಿಕಾ, ಆಸ್ಟ್ರೇಲಿಯಾ, ಅಮೇರಿಕ ಎಲ್ಲಿಗೆ ಹೋದ್ರು ಮೋದಿ. ಮೋದಿ. ಅಂತಾರೆ. ಆದರೆ ಸಿದ್ದರಾಮಯ್ಯನವರ ಹೆಸರನ್ನ ಪಾಕಿಸ್ತಾನದಲ್ಲಿ ಹೇಳಬಹುದು ಅಷ್ಟೇ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.ಬಾವಿಯೊಳಗಿರೋ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ಭಾವಿಸುತ್ತೆ, ಮೋದಿ ಅವರು ಬಾವಿಯಲ್ಲಿರುವ ಕಪ್ಪೆ ಅಲ್ಲ. ದೇಶದಲ್ಲಿ ಎಲ್ಲಿ ಹೋದ್ರು ಮೋದಿ. ಮೋದಿ. ಮೋದಿ. ಅಂತಾರೆ, ಕರ್ನಾಟಕದಿಂದ ಆಚೆ ಸಿದ್ದರಾಮಯ್ಯ ಹೆಸರೇಳುತ್ತಾರಾ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ, ಇವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ಎಂದು ಹೇಳಿದರು.