ಸಿದ್ದರಾಮಯ್ಯ ಹುಟ್ಟು ಹಬ್ಬದ ನಿಮಿತ್ತ ಹಾಲು ಹಣ್ಣು ವಿತರಣೆ

ಲಕ್ಷ್ಮೇಶ್ವರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬದ ನಿಮಿತ್ತ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಗದಗ ಜಿಲ್ಲಾ ಘಟಕ ಹಾಗೂ ಲಕ್ಷೆ್ಮೀಶ್ವರ ತಾಲೂಕು ಘಟಕದ ವತಿಯಿಂದ ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೆರವೇರಿಸಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸಲಾಯಿತು. ಗದಗ ಜಿಲ್ಲಾ ಅಧ್ಯಕ್ಷ ಬಸವರಾಜ್ ಹಿರೇಮನಿ ಗದಗ ಪ್ರಧಾನ ಕಾರ್ಯದರ್ಶಿ ನೀಲಪ್ಪ ಪಡಿಗೇರಿ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಸುರೇಶ ಹಾಗೂ ಮಂಜುನಾಥ ಮುಳಗುಂದ.ಮಹಾಂತೇಶ್ ಬಸಾಪುರ ಮುಂತಾದವರು ಭಾಗವಹಿಸಿದ್ದರು