ಶಿಕ್ಷಕರ ಕೌನ್ಸಲಿಂಗ್ನಲ್ಲಿ, ಗದ್ದಲ,ಗಲಾಟೆ

ಧಾರವಾಡದ ಟಿಸಿಡಬ್ಲು ಕೇಂದ್ರದಲ್ಲಿ ನಡೆಯುತ್ತಿದ್ದ ಶಿಕ್ಷಕರ ಕಡ್ಡಾಯ ವರ್ಗಾವಣೆ ವೇಳೆ ಗಲಾಟೆ, ಗದ್ದಲ ಉಂಟಾದ ಪ್ರಸಂಗ ಜರುಗಿತು. ಒಟ್ಟು 120 ಜನ ಶಿಕ್ಷಕರಿಗೆ ಕೌನ್ಸ್ಲಿಂಗ್ ನಡೆಸಲಾಗುತ್ತಿತ್ತು. ಈ ಕೌನ್ಸ್ಲಿಂಗ್ ವೇಳೆ ಶಿಕ್ಷಕರು ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ಕಡ್ಡಾಯ ವರ್ಗಾವಣೆ ಸರ್ಕಾರದ ನಿಯಮವಿದ್ದರೂ ಹೊಸ ಸ್ಥಳ ನಿಯುಕ್ತಿ ಮಾಡುವಲ್ಲಿ ಶಿಕ್ಷಕರ ಸಂಘ ಹಾಗೂ ಇಲಾಖೆ ವಿಫಲವಾಗಿದೆ. ಮೊದಲು ಶಿಕ್ಷಕರನ್ನು ವರ್ಗಾವಣೆ ಮಾಡುತ್ತಾರೆ. ಆನಂತರ ಕೌನ್ಸ್ಲಿಂಗ್ ವೇಳೆ ಕಡಿಮೆ ಸೀಟುಗಳನ್ನು ತೋರಿಸುತ್ತಾರೆ ಎಂದು ಆರೋಪಿಸಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದಲ್ಲಿ 25 ಹುದ್ದೆಗಳಿಗೆ ವರ್ಗಾವಣೆ ಮಾಡಬೇಕಿತ್ತು. ಈಗ ಕೇವಲ 15 ಜನ ಶಿಕ್ಷಕ ಹುದ್ದೆಗಳಿಗೆ ಮಾತ್ರ ಕೌನ್ಸ್ಲಿಂಗ್ ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಗಲಾಟೆ ಉಂಟಾಯಿತು. ಬೇರೆ ಕಡೆ ಸ್ಥಳ ನಿಯುಕ್ತಿಗೊಳಿಸದೇ ಮನೆಗೆ ಹೋಗಿ ಎನ್ನುತ್ತಿದ್ದಾರೆ. ಸೀನಿಯಾರಿಟಿ ಆಧಾರದ ಮೇಲೆ ಅಗತ್ಯ ಇರುವಷ್ಟು ಮಾತ್ರ ಶಿಕ್ಷಕರನ್ನು ಕೌನ್ಸ್ಲಿಂಗ್ಗೆ ಕರೆಯದೇ ಹೆಚ್ಚಿನ ಜನರನ್ನು ಕರೆಯಲಾಗಿದೆ ಎಂಬುದು ಶಿಕ್ಷಕರ ಆರೋಪವಾಗಿತ್ತು. ಗಲಾಟೆ, ಗದ್ದಲ ಆರಂಭವಾಗುತ್ತಿದ್ದಂತೆ ಡಿಡಿಪಿಐ, ಬಿಇಓಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.