ಬಿಜೆಪಿ ಮೋದಿ ಸರ್ಕಾರ ನಡೆ ಖಂಡಿಸಿ, ಪ್ರತಿಭಟನೆ.

ಧಾರವಾಡ

ರೈತರ ಮೇಲೆ ಕಾರು ಹರಿಸಿ ಬರ್ಬರ ಹತ್ಯೆಮಾಡಿದ ಬಿಜೆಪಿ ಸರ್ಕಾರದ ಹೀನ ಕೃತ್ಯವನ್ನು ಖಂಡಿಸಿ, ಬಿಜೆಪಿ ಸರ್ಕಾರದ ಪ್ರತಿಕೃತಿ ದಹಿಸಿ ಆರ್.ಕೆ.ಎಸ್ ಸಂಘಟನೆ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ವಿವೇಕಾನಂದ ವೃತ್ತದಲ್ಲಿ ಆರ್ ಕೆ ಎಸ್ ಸಂಘಟನೆ ಬಿಜೆಪಿ ಸರ್ಕಾರದ ಪ್ರತಿಕೃತಿ ದಹನ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಸಿಶ್ ಮಿಶ್ರಾ ಮತ್ತು ಆತನ ಗುಂಡಾಗಳೊಂದಿಗೆ ರೈತರ ಮೇಲೆ ಕಾರು ಹರಿಸಿ 8 ಜನರ ಕಗ್ಗೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ನಡಿಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೆಲವೇ ಬಂಡವಾಳಶಾಹಿ, ಕಾರ್ಪೋರೇಟ್ ಮನೆತನಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಪರವಾಗಿ ಇದೆ ಬಿಜೆಪಿ ಮೋದಿ ಸರ್ಕಾರ, ದೇಶದ ಕೋಟ್ಯಂತರ ರೈತರ, ಕಾರ್ಮಿಕರ, ಬಡಜನರು ಹಾಗೂ ಮಧ್ಯಮವರ್ಗದ ವಿರೋದಿಯಾಗಿ ಬಿಜೆಪಿ ಪಕ್ಷ ವರ್ತಿಸುತ್ತದೆ ಆರೋಪಿಸಿ ಪ್ರತಿಭಟನೆ ನಡೆಸಿದ್ರು.