ರಾಮುಲು ಒಬ್ಬ ಅನ್ ಫಿಟ್ ಸಚಿವ


ರಾಮುಲು ಒಬ್ಬ ಅನ್ ಫಿಟ್ ಸಚಿವ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಾರಿಗೆ ಸಚಿವರದಾದ್ರು ಕೂಡ ಕ್ಷೇತ್ರಕ್ಕಾಗಲಿ ರಾಜ್ಯಕ್ಕೆ ಆಗಲಿ ಯಾವ ಪ್ರಯೋಜನವೂ ಇಲ್ಲದ್ದಾಗಿದೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿಯವರು ವಾಗ್ದಾಳಿ ನಡೆಸಿದ್ದಾರೆ. ಮೊಳಕಾಲ್ಮುರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ನೀಡಿದ ಭರವಸೆಗಳು ಹುಸಿಯಾಗಿವೆ. ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದರೂ ಬಿಜೆಪಿ ಸರ್ಕಾರವೂ ಜನರ ಸಹಾಯಕ್ಕೆ ಧಾವಿಸುತ್ತಿಲ್ಲ. ಕೋವಿಡ್‍ನಿಂದ ಮೃತರಾದ ಕುಟುಂಬಗಳಿಗೆ ಈವರೆಗೂ ರಾಜ್ಯ ಸರ್ಕಾರ ಘೋಷಣೆ ಮಾಡಿದ ಪರಿಹಾರ ಈವರೆಗೂ ದಕ್ಕಿಲ್ಲ ಎಂದು ಆರೋಪಿಸಿದರು