ತರಾತುರಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಆಟೋ ಚಾಲಕರು ಆಕ್ರೋಶ
ಗದಗ
ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ ಹಿನ್ನೆಲೆಯಲ್ಲಿ ಗದಗನಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದವರು ನಗರದ ಹಳೇ ಡಿ ಸಿ ಆಫೀಸ್ ಸರ್ಕಲ್ ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು. ನೂರಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ರಸ್ತೆ ಕಾರ್ಯಕ್ಕೆ ಮುಂದಾಗಲಿಲ್ಲ. ಡಿಸಿಯವರೇ ಜಿಮ್ಸ್ ಹೋಗುವ ರಸ್ತೆಯಲ್ಲಿ ಸಂಚರಿಸುವುದಕ್ಕೆ ಹಿಂದೇಟು ಹಾಕ್ತಿದ್ದಾರೆ. ಇನ್ನು ಪ್ರತಿ ದಿನ ರೋಗಿಗಳನ್ನ ಕರೆದೊಯ್ಯಲು ನಾವು ಪರದಾಡುತ್ತಿದ್ದೇವೆ. ನಮ್ಮ ಕೂಗು ಅಧಿಕಾರಿಗಳಿಗೆ ಮುಟ್ಟಲಿಲ್ಲ. ಇದೀಗ ಸಿಎಂ ಬರುತ್ತಾರೆ ಎಂಬ ಕಾರಣಕ್ಕೆ ಸಿಎಂ ಮೆಚ್ಚಿಸಲು ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.