ನನ್ನ ಆರೋಗ್ಯ ನನ್ನ ಜವಾಬ್ದಾರಿ

HDFC Bank. ಹಾಗೂ RED FM 93.5 ಸಹಭಾಗಿತ್ವದಲ್ಲಿ ಕೋವಿಡ್ ಮಹಾಮಾರಿಯನ್ನು ಎದುರಿಸಲು" ನನ್ನ ಆರೋಗ್ಯ ನನ್ನ ಜವಾಬ್ದಾರಿ" ಅಭಿಯಾನದ ಅಂಗವಾಗಿ ನಡೆದ ಸಹಿ ಸಂಗ್ರಹ ಕಾರ್ಯಕ್ರಮ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ Dr.M.B. ಚೆಟ್ಟಿ, ಹಾಗೂ Dr.P.U. ಕೃಷ್ಣರಾಜ್, Dr. K.V ಅಕ್ಷತಾ, Dr. S.V. ಸಜ್ಜನರ್,Dr. ಉಮೇಶ ಮುಕ್ತಾಮಠ ಮತ್ತು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಭಾಗವಹಿಸಿ ಸಹಿ ಮಾಡುವುದರ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದರು. Red FM 93.5 ಪರವಾಗಿ ನಿಲಯ ನಿರ್ದೇಶಕ ಶೋಭಿತ್ ಶೆಟ್ಟಿ, ಮಾರುಕಟ್ಟೆ ಮುಖ್ಯಸ್ಥ ಶ್ರೀಕೃಷ್ಣ ಬೆಂಗೇರಿ, RJ ಮಾಹಿ, ಸಾಮ್ರಾಟ್,ಸಾಗರ ಗಳಗಿ ಭಾಗವಹಿಸಿದ್ದರು.