ಮಧ್ಯ ಚಿಲಿಯ ಕರಾವಳಿಯಲ್ಲಿ ಭೂಕಂಪ : 6.2 ತೀವ್ರತೆ ದಾಖಲು

ಮಧ್ಯ ಚಿಲಿಯ ಕರಾವಳಿಯಲ್ಲಿ ಭೂಕಂಪ : 6.2 ತೀವ್ರತೆ ದಾಖಲು

ಸ್ಯಾಂಟಿಯಾಗೊ (ಚಿಲಿ): ಮಧ್ಯ ಚಿಲಿಯ ಕರಾವಳಿಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

NCS ಪ್ರಕಾರ, ಮಧ್ಯ ಚಿಲಿಯ ಕರಾವಳಿಯಲ್ಲಿ ಗುರುವಾರ ರಾತ್ರಿ 11:03 ಕ್ಕೆ (IST) ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.

ಭೂಕಂಪದಿಂದಾಹ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 22 ರಂದು ರಿಕ್ಟರ್ ಮಾಪಕದಲ್ಲಿ 6.3 ರ ತೀವ್ರತೆಯ ಭೂಕಂಪವು ಚಿಲಿಯ ಇಕ್ವಿಕ್‌ನಿಂದ 519 ಕಿಮೀ ಆಗ್ನೇಯಕ್ಕೆ ಅಪ್ಪಳಿಸಿತ್ತು.