ಬಸವಕಲ್ಯಾಣ ದಲಿ 20ನೇ ಕಲ್ಯಾಣ ಪರ್ವ ಅಕ್ಟೋಬರ್ 18:19 ಹಾಗೂ 20 ರಂದು ನಡೆಯಲಿದ್ದೆ
ಮಾತೆಮಹಾದೇವಿ ಲಿಂಗೈಕ್ಯರಾದ ನಂತರ ಮೂರನೇ ಕಲ್ಯಾಣ ಪರ್ವ ಇದಾಗಿದ್ದು. ಲಿಂಗಾಯತ ಧರ್ಮದ ಶರಣರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಯಾವುದೇ ಜಾತಿಭೇದವಿಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಬಸವಧರ್ಮ ಪೀಠಾಧ್ಯಕ್ಷೆ ಪೂಜ್ಯಶ್ರೀ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಅವರು ಕರೆಕೊಟ್ಟಿದ್ದಾರೆ. ಲಿಂಗಾಯತ ಧರ್ಮದ ಒಳಪಂಗಡ ಹಾಗೂ ಯಾವುದೇ ಜಾತಿಭೇದವಿಲ್ಲದೆ ಲಕ್ಷಾಂತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯದಿಂದ ಲಿಂಗಾಯತ ಭಕ್ತರು,ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಬಸವತತ್ವದ ಅನುಯಾಯಿಗಳು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಸವಧರ್ಮ ಪೀಠಾಧ್ಯಕ್ಷೆ ಪೂಜ್ಯಶ್ರೀ ಮಹಾಜಗದ್ಗುರು ಡಾ. ಗಂಗಾದೇವಿ ಅವರು ಕರೆಕೊಟ್ಟಿದ್ದಾರೆ.