ಅಖಂಡ ಭಾರತದ ರೈತರಿಗೆ ಹಾಗೂ ರೈತಾಪಿ ಸಂಘಟನೆಗಳಿಗೆ ಜಯ

ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದು, ಕರುನಾಡ ರೈತ ಸಂಘದ ರಾಜ್ಯಾಧ್ಯಕ್ಷ ಮಹಬೂಬ್ ಪಾμÁ ಹರ್ಷ ವ್ಯಕ್ತಪಡಿಸಿದರು. ವರ್ಷಗಳ ಹೋರಾಟದ ಫಲ ಅಖಂಡ ಭಾರತದ ರೈತರಿಗೆ ಹಾಗೂ ರೈತಾಪಿ ಸಂಘಟನೆಗಳಿಗೆ ಇಂದು ಜಯ ಸಿಕ್ಕಿದೆ. ಈ ಕಾಯ್ದೆಗಳ ವಿರುದ್ಧ ಮೊದಲು ಕರ್ನಾಟಕದಲ್ಲಿ ಧ್ವನಿ ಎತ್ತಿದ್ದು ಕರುನಾಡ ರೈತ ಸಂಘ. ಕಾಯ್ದೆಯನ್ನು ಹಿಂಪಡೆಯುವಂತೆ ನಡೆದ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರು. ಕೇಂದ್ರ ಸರ್ಕಾರ ಖುಷಿ ಕಾಯ್ದೆ ಹಿಂಪಡೆದ ದಿನ ರೈತರಿಗೆ ರೈತ ಉತ್ಸವ ಆಗಲಿದೆ ಎಂದು ಹೇಳಿದರು.